
ಕನ್ಸೈನೆರೊಲ್ಯಾಕ್
ಇಲ್ಲಿಯವರೆಗಿನಕತೆ
ಶಾರುಖ್ ಖಾನ್ ನಮ್ಮ ಬ್ಯ್ರಾಂಡ್ ಅಂಬಾಸೆಡರ್ ಆದದ್ದು ಹೇಗೆ ಮತ್ತು ಅಂತಹ ಇನ್ನಷ್ಟು ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳಿ.
ಇನ್ನಷ್ಟು ತಿಳಿಯಿರಿ
ಪ್ರಸ್ತುತ – 2000
ವರ್ಷ 2000 - ಎಸ್ ಆರ್ ಕೆ ನೆರೊಲ್ಯಾಕ್ ನ ಬ್ಯ್ರಾಂಡ್ ಅಂಬಾಸೆಡರ್ ಆದರು 2006 - ಜಿ ಎನ್ ಪಿ ಎಲ್ ಅನ್ನು ಕನ್ಸೈ ನೆರೊಲ್ಯಾಕ್ ಎಂದು ಹೆಸರಿಸಲಾಯಿತು. 2004-2006 ವರೆಗೆ, ಲೋಟೆ ಮತ್ತು ಜೈನ್ಪುರ ಫ್ಯಾಕ್ಟರಿಗಳಿಗೆ ಅನುಕ್ರಮವಾಗಿ ಗ್ರೀನ್ ಟೆಕ್ ಸುರಕ್ಷತಾ ಪ್ರಶಸ್ತಿ ಚಿನ್ನ ಮತ್ತು ರಜತವನ್ನು ನೀಡಲಾಯಿತು. ಈ ಘಟಕಗಳಿಗೆ ಓ ಎಚ್ ಎಸ್ ಎ ಎಸ್18001 ಸರ್ಟಿಫಿಕೇಶನ್ ಕೂಡ ನೀಡಲಾಯಿತು. ಬ್ಯ್ರಾಂಡ್ ನೆರೊಲ್ಯಾಕ್ ಗೆ ಹೆಚ್ಚು ಗಮನ ನೀಡುವ ದೃಷ್ಟಿಯಿಂದ ಶ್ರೀಯುತ ಅಮಿತಾಭ್ ಬಚ್ಚನ್ ಅವರನ್ನು ಬ್ಯ್ರಾಂಡ್ ಅಂಬಾಸೆಡರ್ ಮಾಡಲಾಯಿತು. ಆಕಾಂಕ್ಷಾ ಫೌಂಡೇಶನ್ ಜೊತೆಗೆ ಸೇರಿಕೊಂಡು ಬಡ ಮಕ್ಕಳಿಗೆ ಸಹಾಯ ನೀಡಲು ಉಪಕ್ರಮ ತೆಗೆದುಕೊಳ್ಳಲಾಯಿತು.

2000-1991
2000 ರ ಹೊತ್ತಿಗೆ ಫೋರ್ಬ್ಸ್ ಗೋಕಕ್ ಮತ್ತು ಅದರ ಸಹಯೋಗಿಗಳ ಸಂಪೂರ್ಣ ಸ್ವಾಧೀನವನ್ನು ಪಡೆದುಕೊಂಡ ನಂತರ ಸಂಸ್ಥೆಯು 1999 ರಲ್ಲಿ ಕನ್ಸೈ ಪೇಂಟ್ಸ್ ನ ಅಂಗಸಂಸ್ಥೆಯಾಯಿತು. ಈ ವೇಳೆಗೆ ಸಂಸ್ಥೆಯ ಒಟ್ಟು ಇಕ್ವಿಟಿಯ 64.52% ದಷ್ಟು ಪಾಲುದಾರಿಕೆಯನ್ನು ಕನ್ಸೈ ಪೇಂಟ್ಸ್ ಹೊಂದಿತ್ತು. ನೆರೊಲ್ಯಾಕ್ ನ “ಜಬ್ ಘರ್ ಕಿ ರೌನಕ್ ಬಢಾನೀ ಹೋ” ಎಂಬ ಜಿಂಗಲ್ ಪ್ರಸಿದ್ಧವಾಯಿತು.

1990- 1981
1983 ರಲ್ಲಿ, ನೆರೊಲ್ಯಾಕ್ ಜಿ ಎನ್ ಪಿ101 ಆಟೋ ಪೇಂಟ್ಸ್ ಅನ್ನು ಬಾಂಬೆ ಮತ್ತು ಪುಣೆ ನಗರಗಳಲ್ಲಿ ಶುರು ಮಾಡಿತು. ಅದು 24 ಬೇಸಿಕ್ ಶೇಡ್ ಗಳನ್ನು, 12 ಮೆಟಲಿಕ್ ರೇಂಜ್ ಶೇಡ್ ಗಳನ್ನು ಮತ್ತು 12 ವೈಬ್ರಂಟ್ ರೇಂಜ್ ಶೇಡ್ ಗಳನ್ನು ಒಳಗೊಂಡಿತ್ತು. 1986 ರಲ್ಲಿ, ಜಪಾನಿನ ಜಿ ಎನ್ ಪಿ ಎಲ್ ಕನ್ಸೈ ಪೇಂಟ್ಸ್ ಕಂಪನಿ ಲಿಮಿಟೆಡ್ ಜೊತೆಗೆ ಓಸಾಕಾ ನಗರದಲ್ಲಿ ಟಿಎಎ ಗೆ ಸಹಿ ಹಾಕಿತು. ಈ ಟಿಎಎ ಮೂಲಕ ಆಟೊಮೋಟಿವ್ ಉತ್ಪಾದನೆಗಳಿಗಾಗಿ ಕ್ಯಾಥೋಡಿಕ್ ಎಲೆಕ್ಟ್ರೋದಿಪೋಸಿಷನ್ ಪ್ರೈಮರ್ ಮತ್ತು ಇತರ ಸಾಫಿಸ್ಟಿಕೇಟೆಡ್ ಕೋಟಿಂಗ್ ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು. ಜಿ ಎನ್ ಪಿ ಎಲ್ ಭಾರತದಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಿದ ಪ್ರಥಮ ಸಂಸ್ಥೆಯಾಯಿತು.

1980- 1950
1970 ರಲ್ಲಿ, ಗುಡಿ ಎಂಬ ನಗುಮುಖದ ಹುಲಿಯನ್ನು ಸಂಸ್ಥೆಯ ಮಾಸ್ಕಾಟ್/ಶುಭಕಾರಿ ಆಗಿ ಪರಿಚಯಿಸಲಾಯಿತು. 1957 ರಲ್ಲಿ, ಸಂಸ್ಥೆಯ ಹೆಸರನ್ನು ಗುಡ್ ಲ್ಯಾಸ್ ನೆರೊಲ್ಯಾಕ್ ಪೇಂಟ್ ಪ್ರೈ. ಲಿ. ಎಂದು ಬದಲಾಯಿಸಲಾಯಿತು. ಸಂಸ್ಥೆಯ ಹೆಸರಲ್ಲಿ ಅದರ ಅತ್ಯಂತ ಯಶಸ್ವಿ ಉತ್ಪಾದನೆಯ ಬ್ಯ್ರಾಂಡ್ ಹೆಸರನ್ನು ಸೇರಿಸಿಕೊಳ್ಳುವ ಉದ್ದೇಶದಿಂದ ಹೀಗೆ ಮಾಡಲಾಯಿತು. 1968 ರಲ್ಲಿ ಸಂಸ್ಥೆಯು ಸಾರ್ವಜನಿಕವಾಯಿತು ಮತ್ತು “ಪ್ರೈವೇಟ್” ಎಂಬ ಪದವನ್ನು ತೆಗೆಯಲಾಯಿತು. 1950 ರ ದಶಕದಲ್ಲಿ, ಎಂಟಿ-ಗ್ಯಾಸ್ ವಾರ್ನಿಶ್ ಸಂಸ್ಥೆಯ ಅತ್ಯಂತ ಪ್ರಸಿದ್ಧ ಉತ್ಪಾದನೆಯಾಗಿತ್ತು ಮತ್ತು ಇದನ್ನು ಮುಖ್ಯವಾಗಿ ರಕ್ಷಣಾ ಕ್ಷೇತ್ರದಲ್ಲಿ ಉಪಯೋಗಿಸಲಾಗುತ್ತಿತ್ತು.

1920 ರ ಪ್ರಾರಂಭದಲ್ಲಿ
ನವಂಬರ್ 1930 ರಲ್ಲಿ, ಗುಡ್ ಲ್ಯಾಸ್ ವಾಲ್ ಮತ್ತು ಲೆಡ್ ಇಂಡಸ್ಟ್ರೀಸ್ ಗ್ರೂಪ್ ಲಿ. ಸಂಸ್ಥೆಯನ್ನು ರೂಪಿಸುವುದಕ್ಕಾಗಿ ಯು.ಕೆ. ಯ ಮೂರು ಬ್ರಿಟಿಷ್ ಸಂಸ್ಥೆಗಳು ಒಟ್ಟುಗೂಡಿದವು. ಅನಂತರ ಅದು ಲೆಡ್ ಇಂಡಸ್ಟ್ರೀಸ್ ಗ್ರೂಪ್ (ಎಲ್ ಐ ಜಿ) ಲಿ. ಆಯಿತು. ಏಪ್ರಿಲ್ 1993 ರಲ್ಲಿ, ಎಲ್ ಐ ಜಿ, ಲಿವರ್ ಪೂಲ್, ಇಂಗ್ಲೆಂಡ್ ಈ ಸಂಸ್ಥೆಯನ್ನು ಖರೀದಿಸಿ ಅದನ್ನು ಗುಡ್ ಲ್ಯಾಸ್ ವಾಲ್ (ಇಂಡಿಯಾ) ಲಿ. ಎಂದು ಹೆಸರಿಸಿತು. 1920 ರ ಪ್ರಾರಂಭದಲ್ಲಿ ಎಲನ್ ಬ್ರೋಸ್. ಅಂಡ್ ಕಂ. ಲಿ. ಎಂಬ ಇಂಗ್ಲಿಷ್ ಸಂಸ್ಥೆ ಅಮೆರಿಕನ್ ಪೇಂಟ್ ಮತ್ತು ವಾರ್ನಿಶ್ ಕಂಪನಿಯನ್ನು ಖರೀದಿಸಿತು. ಅನಂತರ ಇದು ಗಹಗನ್ ಪೇಂಟ್ ಅಂಡ್ ವಾರ್ನಿಶ್ ಕಂ. ಲಿ. ಆಯಿತು.